ಗಣಿಗಲ ತೋರ ಭಾರತದ ಎಲ್ಲೆಡೆಯೂ ಕಾಣಬರುವ ಒಂದು ಅಲಂಕಾರಿಕ ಸಸ್ಯ. == ಲಕ್ಷಣಗಳು == ಸದಾ ಹಸಿರಿನ ಸಸ್ಯ.ಜೋಲು ರೆಂಬೆಗಳಿರುತ್ತವೆ.ಸಾಧಾರಣ ಗಾತ್ರವಿದ್ದು,ಹೂವು ಬಿಳಿ ಬಣ್ಣವಿದೆ. == ವೈಜ್ಞಾನಿಕ ಹೆಸರು == ಬ್ಯಾರಿಂಗ್ಟೋನಿಯ ರೆಸೆಮೊಸ ಎಂಬುದು ವೈಜ್ಞಾನಿಕ ನಾಮ.ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದೆ.ನೀವಾರ ಎಂಬುದು ಇದರ ಪರ್ಯಾಯ ನಾಮ. == ಹರಡುವಿಕೆ == ಸಮುದ್ರ ತೀರ ಪ್ರದೇಶದ ಚೌಗು ಕಾಡುಗಳಲ್ಲಿ,ಅಳಿವೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.ಮೊಜಾಂಬಿಕ್, ದಕ್ಷಿಣ ಆಫ್ರಿಕದಿಂದ ಹಿಡಿದು,ಭಾರತ,ಶ್ರೀಲಂಕಾ,ಮಲೇಷಿಯಾ,ಚೀನಾ,ಲಾವೋಸ್ ಮತ್ತು ಆಸ್ಟ್ರೇಲಿಯ ಸಮುದ್ರ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ದಕ್ಷಿಣ ಆಫ್ರಿಕ ದೇಶದಲ್ಲಿ ಇದು ಸಂರಕ್ಷಿತ ಸಸ್ಯವಾಗಿದೆ. ಸ್ವಾಭಾವಿಕವಾಗಿ ನದೀದಂಡೆಗಳಲ್ಲಿ ತಾನೇತಾನಾಗಿ ಬೆಳೆಯುತ್ತದೆ. ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲ ಕಡೆಗಳಲ್ಲೂ ಇದನ್ನು ಕಾಣಬಹುದು. == ಲಕ್ಷಣಗಳು == ಸದಾ ಹಸುರಾಗಿರುವ ಜೋಲುರೆಂಬೆಗಳು ಈ ಮರದ ವೈಶಿಷ್ಟ್ಯ. ನಸುಗೆಂಪು ಬಣ್ಣದ ಹೂ ಬಿಡುತ್ತದೆ. ಬೀಜಗಳಲ್ಲಿರುವ ಪಿಷ್ಟದ ಪರಿಣಾಮ ಹೆಚ್ಚು. ಈ ಪಿಷ್ಟವನ್ನು ಸಂಗ್ರಹಿಸಿ ಆಹಾರ ಪದಾರ್ಥವಾಗಿ ಬಳಸುವ ಪದ್ಧತಿ ಮಲಯದಲ್ಲಿ ಉಂಟು. ಅಲ್ಲದೆ ಮರದ ಎಳೆ ಎಲೆಗಳನ್ನು ಸಹ ತಿನ್ನುವುದಿದೆ. ಗಣಿಗಲ ತೋರ ಸಾಧಾರಣ ಗಾತ್ರದ ಸುಂದರ ಮರ. == ಉಪಯೋಗಗಳು == ಇದರ ವೃದ್ಧಿ ಬೀಜಗಳ ಮೂಲಕ. ಬೀಜ, ಕಾಯಿ ಮತ್ತು ಬೇರುಗಳಿಗೆ ಔಷಧೀಯ ಗುಣಗಳಿವೆ. ಕಾಯಿಯನ್ನು ಕೆಮ್ಮು, ಉಬ್ಬಸ, ಅತಿಸಾರ ಮುಂತಾದ ಕಾಯಿಲೆಗಳ ನಿವಾರಣೆಗೂ ಬೀಜಗಳನ್ನು ಹಸುವಿನ ತುಪ್ಪದೊಂದಿಗೆ ಸೇರಿಸಿ ಅರೆದು ಕಾಡಿಗೆಯ ರೂಪದಲ್ಲಿ ಹಲವು ಬಗೆಯ ಕಣ್ಣುಬೇನೆಗಳಿಗೂ ಬಳಸುವುದಿದೆ. ಇದರ ಬೀಜ, ತೊಗಟೆಗಳಲ್ಲಿ ಮೀನು ಮತ್ತು ಕಾಡುಹಂದಿಗಳಿಗೆ ಮಾರಕವಾದ ವಿಷವಿರುವುದರಿಂದ ಆ ಪ್ರಾಣಿಗಳನ್ನು ಕೊಲ್ಲಲು ಇವನ್ನು ಉಪಯೋಗಿಸುತ್ತಾರೆ.ಇದನ್ನು ಉದ್ಯಾನರಸ್ತೆಗಳ ಅಕ್ಕ ಪಕ್ಕಗಳಲ್ಲಿ ಬೆಳೆಸುತ್ತಾರೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ://..//. 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. ://..//////.?=307 2012-03-09 ವೇಬ್ಯಾಕ್ ಮೆಷಿನ್ ನಲ್ಲಿ. [೧] 2011-02-18 ವೇಬ್ಯಾಕ್ ಮೆಷಿನ್ ನಲ್ಲಿ. -